ಶ್ರೀ ಮಂಜುನಾಥಸ್ವಾಮಿ ಪ್ರಥಮ ದರ್ಜೆ ಕಾಲೇಜು ತಮ್ಮೆಲ್ಲರಿಗೆ ಸ್ವಾಗತ...

... ಶ್ರೀ ಮಂಜುನಾಥಸ್ವಾಮಿ ವಿದ್ಯಾ ಸಂಸ್ಥೆಯು 1987 ರಲ್ಲಿ ಪರಿಶಿಷ್ಟ ಜಾತಿಯ ಸದಸ್ಯರಿಂದ ಪ್ರಾರಂಭಗೊಂಡಿದ್ದು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಧ್ಯೇಯ್ಯೋದ್ದೆಶವನ್ನು ಹೊಂದಿದೆ. ನಮ್ಮ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಚಟುವಟಿಕೆಯಾದ ಸಾಮಾಜಿಕ ಅರವು ಹಾಗೂ ಆರೋಗ್ಯ ಕಾಳಜಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ.

ಬಿ.ಎ ಮತ್ತು ಬಿ.ಕಾಂ ವಿಭಾಗಗಳೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕ್ರಿಯಾಶೀಲತೆಯನ್ನು ಬೆಳೆಸುವಲ್ಲಿ ಸುಮಾರು 30 ವರ್ಷಗಳಿಂದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಬಹುಪಾಲು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತಮ್ಮ ಸೇವೆಯನ್ನು ಸಾರ್ಥಕಗೊಳಿಸಿಕೊಳ್ಳುವತ್ತ ಸಾಗುತ್ತಿದೆ.

ನ್ಯಾಕ್ ಮಾನ್ಯತೆ ವಿವರ

ನ್ಯಾಕ್ ಶ್ರೇಣಿ -ಸಿ-1 ಆವೃತ್ತಿ

ಸಿಜಿಪಿಎ-1.55

ಮಾನ್ಯತೆ ದಿನಾಂಕ ಏಪ್ರೀಲ್ 30,2020

ಅಧ್ಯಕ್ಷರ ಸಂದೇಶ

“ಸ್ವಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಪಡೆಯಲು ಅವಿರತ ಪ್ರಯತ್ನವೊಂದೆ ಹರದಾರಿ”.

ಕಾರ್ಯದರ್ಶಿಯವರ ಸಂದೇಶ

“ಸಾಮರಸ್ಯ ಬದುಕಿನೊಂದಿಗೆ ಮಾನವೀಯ ಮೌಲ್ಯಗಳುಳ್ಳ ನಾಗರೀಕ ಸಮಾಜದ ಉತ್ತಮ ನಾಗರಿಕರಾಗಲು ಶಿಕ್ಷಣ ಅತ್ಯಗತ್ಯ”.

ಪ್ರಾಂಶುಪಾಲರ ಸಂದೇಶ

"ನಮ್ಮ ಕಾಲೇಜು ಸಮಾನತೆಯನ್ನು ಸಾರುವಲ್ಲಿ ಹಾಗೂ ತನ್ನ ಗುರಿ ಮತ್ತು ಉದ್ದೇಶಗಳನ್ನು ತಲುಪುವಲ್ಲಿ ಕ್ರಿಯಾಶೀಲವಾಗಿದೆ."