ಎಸ್.ಎಮ್.ಎಸ್.ಪ್ರಥಮ ದರ್ಜೆ ಕಾಲೇಜಿಗೆ ತಮ್ಮೆಲ್ಲರಿಗೆ ಸ್ವಾಗತ .....
       ಶ್ರೀ ಮಂಜುನಾಥಸ್ವಾಮಿ ವಿದ್ಯಾ ಸಂಸ್ಥೆಯು 1987 ರಲ್ಲಿ ಪರಿಶಿಷ್ಟ ಜಾತಿಯ ಸದಸ್ಯರಿಂದ ಪ್ರಾರಂಭಗೊಂಡಿದ್ದು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಧ್ಯೇಯ್ಯೋದ್ದೆಶವನ್ನು ಹೊಂದಿದೆ. ನಮ್ಮ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಚಟುವಟಿಕೆಯಾದ ಸಾಮಾಜಿಕ ಅರಿವು ಹಾಗೂ ಆರೋಗ್ಯ ಕಾಳಜಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ.

ನಮ್ಮ ಸಂಸ್ಥೆಯ ಅಡಿಯಲ್ಲಿ 1987-88ರ ಸಾಲಿನಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೊಂಡಿದ್ದು. ಇದು ಸ್ವಂತ ಕಟ್ಟಡವನ್ನು ಹೊಂದಿ, ಕಲಾ ಮತ್ತು ವಿಜ್ಞಾನ ವಿಭಾಗಗಳೊಂದಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ.

1988-89 ರಲ್ಲಿ ನಮ್ಮ ಸಂಸ್ಥೆಯ ಸಂಸ್ಥಾಪಕರಾದ ಕೊಂಡಿಕಾರ್ ವೀರಪ್ಪರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿ, ದಾವಣಗೆರೆಯ ನಿಟ್ಟುವಳ್ಳಿಯ ಬಡಾವಣೆಯಲ್ಲಿ ಪ್ರಥಮ ದರ್ಜೆ ಕಾಲೇಜು ತೆರೆಯಲು ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಸಭೆಯ ತೀರ್ಮಾನದೊಂದಿಗೆ ಶ್ರೀ ಮಂಜುನಾಥಸ್ವಾಮಿ ಪ್ರಥಮ ದರ್ಜೆ ಕಾಲೇಜು, ಎಂಬ ನಾಮಾಂಕಿತದೊಂದಿಗೆ 1988-89 ರಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದ ಸಂಯೋಜನೆಯೊಂದಿಗೆ ಆರಂಭವಾಯಿತು. 2009-10 ನೇ ಸಾಲಿನಿಂದ ದಾವಣಗೆರೆ ವಿಶ್ವಾವಿದ್ಯಾನಿಲಯದೊಂದಿಗೆ ಸಂಯೋಜನೆಗೊಂಡು 2011 ರಲ್ಲಿ ಕರ್ನಾಟಕ ಸರ್ಕಾರದ ಅನುದಾನಕ್ಕೆ ಒಳಪಟ್ಟು, ನಮ್ಮ ಕಾಲೇಜು ಯುಜಿಸಿ ಕಾಯ್ದೆ 1956 ರ ಅಡಿಯಲ್ಲಿ 2012 ರಲ್ಲಿ 2ಎಫ್, 2016 ರಲ್ಲಿ ಶಾಶ್ವತ ಸಂಯೋಜನೆಯನ್ನು ಹೊಂದಿ 2017 ರಲ್ಲಿ 12ಬಿ ಸ್ಥಾನವನ್ನು ಪಡೆದು ನ್ಯಾಕ್ ಸಂಸ್ಧೆಯಿಂದ 2015ರಲ್ಲಿ ಸಿ ಗ್ರೇಡ್ ಮಾನ್ಯತೆಯನ್ನು ಪಡೆದುಕೊಂಡಿದ್ದೆ.

ಬಿ.ಎ ಮತ್ತು ಬಿ.ಕಾಂ ವಿಭಾಗಗಳೊಂದಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕ್ರಿಯಾಶೀಲತೆಯನ್ನು ಬೆಳೆಸುವಲ್ಲಿ ಸುಮಾರು 30 ವರ್ಷಗಳಿಂದ ಶಿಕ್ಷಣವನ್ನು ನೀಡುತ್ತಾ ಬಂದಿದ್ದು, ಬಹುಪಾಲು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತಮ್ಮ ಸೇವೆಯನ್ನು ಸಾರ್ಥಕಗೊಳಿಸಿಕೊಳ್ಳುವತ್ತ ಸಾಗುತ್ತಿದೆ
ಕಾರ್ಯಕ್ರಮಗಳು ಮತ್ತು ಸುದ್ದಿ
ತ್ವರಿತ ಲಿಂಕ್‍ಗಳು
ಕೃತಿಸ್ವಾಮ್ಯ © ಎಸ್.ಎಂ.ಎಸ್.ಎಫ್.ಜಿ.ಸಿ ,
ಫೈರ್ಫಾಕ್ಸ ಬ್ರೌಸರ್‍ನಲ್ಲಿ ಅತ್ಯುತ್ತಮವಾಗಿ ವೀಕ್ಷಿಸಬಹುದು
ಹಕ್ಕು ನಿರಾಕರಣೆ   |  ಗೌಪ್ಯತಾ ನೀತಿ   |  ಡೌನ್ಲೋಡ್‍ಗಳು   |  ಸಂಪರ್ಕಿಸಿ
ನವೀಕರಿಸಿದ ದಿನಾಂಕ - ಅಕ್ಟೋಬರ್ 2018
Top